ಸಂದರ್ಶನಕ್ಕೆ ಅನುಸರಿಸಬೇಕಾದ ಕೆಲವು ನಿಯಮಗಳು

Tags:
  |  
Categories: blogs

ಇಂದಿನ ದಿನಗಳಲ್ಲಿ ಕೆಲವೊಂದು ಸಂಸ್ಥೆಗಳಿಗೆ ನೇಮಕಾತಿ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ಇತ್ತೀಚಿನ ಮಾರುಕಟ್ಟೆ ಪ್ರವೃತ್ತಿಯಲ್ಲಿ ಕಡಿಮೆ ಸಂಬಳದ ಕೆಲಸಗಳು ಹಾಗೂ ಅಧಿಕ ಸಂಬಳದ ಕೆಲಸಗಳು ಇರುವುದರಿಂದ ಅಭ್ಯರ್ಥಿಗಳಿಗೆ ಹಾಗು ಉದ್ಯೋಗದಾತರಿಗೂ ಸರಿಯಾದ ಆಯ್ಕೆಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ಹಾಗಂತ ಇತ್ತೀಚೆಗೆ ಉದ್ಯೋಗ ಅವಕಾಶಗಳು ಕಡಿಮೆಯಾಗಿದೆ ಅಂತ ಅಲ್ಲ,
ಆದರೆ ಅದನ್ನು ತುಂಬಲು ಸಮರ್ಥವಾಗದೆ ಕೆಲವೊಂದು ಸಂಸ್ಥೆಗಳು ಬೇರೆ ಬೇರೆ ಮಾರ್ಗವನ್ನು ಅನುಸರಿಸುತ್ತಿವೆ. ಪ್ರತಿಭಾವಂತ ಹಾಗೂ ತಿಳುವಳಿಕೆಯ ಅಭ್ಯರ್ಥಿಗಳು ಬೇಕಾಗಿದ್ದಲ್ಲಿ ಸತತವಾಗಿ ಅಭ್ಯರ್ಥಿಗಳನ್ನು ಸಂದರ್ಶನ ಮಾಡಬೇಕಾಗಿರುತ್ತದೆ. ಹೀಗಾಗಿ ಕೆಲವೊಂದು ಸಂಸ್ಥೆಗಳು ದಿನಪತ್ರಿಕೆಗಳಲ್ಲಿ, ಹಾಗೆಯೆ ಮಧ್ಯವರ್ತಿಗಳ ಸಹಾಯವನ್ನು ಪಡೆದಿರುತ್ತವೆ.

ಅಭ್ಯಥಿಗಳನ್ನು ಸಂದರ್ಶನ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕಾದ್ದುದು ಬಹಳ ಅನಿವಾರ್ಯವಾಗಿರುತ್ತದೆ. ಯಾಕೆಂದರೆ ಒಬ್ಬ ಸೂಕ್ತ ಅಭ್ಯರ್ಥಿಯು ಸಂಸ್ಥೆಯ ಉನ್ನತಿಗೆ ಕಾರಣನಾಗಿರುತ್ತಾನೆ. ಹಾಗಾಗಿ ಅಭ್ಯರ್ಥಿಯು ಎಷ್ಟು ವರ್ಷಗಳ ಕಾಲ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಬಹುದು, ಅಭ್ಯರ್ಥಿಯಿಂದ ಸಂಸ್ಥೆಗೆ ಯಾವ ರೀತಿ ಉಪಯೋಗ ಆಗಬಹುದು, ಹಾಗೆಯೆ ಅಭ್ಯರ್ಥಿಯ ನಡವಳಿಕೆ ಎಲ್ಲವನ್ನೂ ಚೆನ್ನಾಗಿ ಅರಿತಿರಬೇಕಾಗಿರುತ್ತದೆ. ಹೀಗಿರುವಾಗ ಸಂದರ್ಶನ ಮಾಡುವಾಗ ಸಂದರ್ಶಕರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಸಂದರ್ಶಕರಿಗೆ ಉಪಯೋಗವಾಗುವಂತಹ ಕೆಲವೊಂದು ಉಪಯುಕ್ತ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ.

1. ಅಭ್ಯರ್ಥಿಗಳನ್ನು ಸಂದರ್ಶನ ಮಾಡುವ ಮೊದಲು, ಅಭ್ಯರ್ಥಿಯು ಸಂಸ್ಥೆಯ ಉದ್ಯೋಗಕ್ಕೆ ಸೂಕ್ತನಾದವನೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

2. ಒಂದುವೇಳೆ ಅಭ್ಯರ್ಥಿಯು ಸೂಕ್ತ ಎಂದು ಅನಿಸಿದ್ದಲ್ಲಿ ಸಂಸ್ಥೆಯ ಸಿದ್ದಾಂತಗಳನ್ನು ಅಭ್ಯರ್ಥಿಗೆ ವಿವರಿಸಿ ಆ ವಿಚಾರವಾಗಿ ಅಭ್ಯರ್ಥಿಯ ಅನಿಸಿಕೆಯನ್ನು ಹಾಗೂ ಅಭ್ಯರ್ಥಿಯಿಂದ ಕೆಲವೊಂದು ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮವಾಗಿರುತ್ತದೆ.

3. ಹಾಗೆಯೆ ಅಭ್ಯರ್ಥಿಗೆ ಕೆಲಸದ ಸಮಯ, ಅಭ್ಯರ್ಥಿಗೆ ಕೊಡುವ ಸಂಬಳ, ಹಾಗೆಯೆ ಸಂಸ್ಥೆಯ ನಿಯಮಾವಳಿಗಳನ್ನು ಮೊದಲೇ ತಿಳಿಸಿ ಅಭ್ಯರ್ಥಿಯಿಂದ ಖಚಿತವಾದ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮವಾಗಿರುತದೆ.

4. ಅಭ್ಯರ್ಥಿಯು ಸಂಸ್ಥೆಯ ನಿಯಮಾವಳಿಗಳನ್ನು ಕೇಳಿದ ನಂತರ ಅಭ್ಯರ್ಥಿಯು ಕೊಡುವ ಉತ್ತರವು ಅಷ್ಟೇ ಪ್ರಾಮುಖ್ಯವಾಗಿರುತದೆ. ಯಾಕೆಂದರೆ ಅಭ್ಯರ್ಥಿಯು ಯಾವುದೇ ರೀತಿಯ ದ್ವಂದ್ವ ಮನಸ್ಸಿನಿಂದ ಉತರ ಕೊಟ್ಟಿದ್ದೆ ಆಗಿದ್ದಲ್ಲಿ, ಅಂತಹ ಅಭ್ಯರ್ಥಿಗೆ ಕೂಡಲೇ ಉಪಯುಕ್ತ ಮಾಹಿತಿನೀಡಿ ಅಭ್ಯರ್ಥಿಯಾ ದ್ವಂದ್ವ ಮನಸ್ಸನ್ನು ನಿವಾರಿಸಬೇಕಾಗುತ್ತದೆ. ಕೊನೆಗೆ ಸಂದರ್ಶಕರು ತಮ್ಮ ಸಂಸ್ಥೆಗೆ ಅಭ್ಯಥಿಯು ಯೋಗ್ಯನೇ ಎಂದು ತಿಳಿದುಕೊಳ್ಳ ಬೇಕಾಗುತ್ತದೆ. ಹಾಗೆಯೆ ಅಭ್ಯರ್ಥಿಯು ಕೂಡ ತಾನು ಈ ಸಂಸ್ಥೆಯಲ್ಲಿ ಕೆಲಸಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಯೋಚಿಸಿರುತ್ತಾನೆ. ಮೊದಲೇ ಸಂಸ್ಥೆಯ ನಿಯಮಾವಳಿಗಳನ್ನು ಅಭ್ಯರ್ಥಿಗೆ ಹೇಳುವದರಿಂದ ನಂತರ ಯಾವುದೇ ರೀತಿಯ ತೊಂದರೆಗಳು ಬರುವುದು ಇಲ್ಲ.

5. ಮತ್ತೊಂದು ಮುಖ್ಯವಾದ ಅಂಶ ಎಂದರೆ ಅಭ್ಯರ್ಥಿಯ ಆಸಕ್ತಿ. ಸಂದರ್ಶಕರು ಅಭ್ಯರ್ಥಿಯನ್ನು ಸಂದರ್ಶನ ಮಾಡುವಾಗ ಅಭ್ಯರ್ಥಿಯ ಆಸಕ್ತಿಯನ್ನು ಗಮನಿಸ ಬೇಕಾದುದು ಬಹಳ ಮುಖ್ಯವಾಗಿರುತ್ತದೆ. ಕೆಲವೊಂದು ಸಲ ಅಭ್ಯರ್ಥಿಯು ಒಲ್ಲದ ಮನಸ್ಸಿನಿಂದ ಅಥವಾ ಹತಾಶೆಯಿಂದ ಸಂಸ್ಥೆಯ ಸಿದ್ದಂಥ ಹಾಗೂ ನಿಯಮಾವಳಿಗಳನ್ನು ಒಪ್ಪಿಕೊಳ್ಳುವ ಪ್ರಮಾಣವು ಹೆಚ್ಚಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಯ ಆಸಕ್ತಿಯನ್ನು ತಿಳಿದು ಅಭ್ಯರ್ಥಿಗೆ ಹೊಂದಾಣಿಕೆಯಾಗುವಂಥಹ ಕೆಲಸವನ್ನು ಕೊಡುವುದರಿಂದ ಸಂಸ್ಥೆ ಹಾಗೂ ಅಭ್ಯರ್ಥಿಗಳಿಬ್ಬರು ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದು.

6. ಮೇಲೆ ತಿಳಿಸಿದ ಎಲ್ಲಾ ವಿವರಗಳನ್ನು ತಿಳಿದುಕೊಡನಂತರ ಮೌಲ್ಯಮಾಪನ ಮಾಡಬೇಕಾಗುತ್ತದೆ. ಯಾಕೆಂದರೆ ಎಲ್ಲಾ ರೀತಿಯ ಸಂದರ್ಶನ ಮುಗಿದ ನಂತರ ತೆಗೆದು ಕೊಳ್ಳುವ ನಿರ್ಧಾರವು ಸಂಸ್ಥೆಯ ದೃಷ್ಟಿಯಿಂದ ಅತೀ ಪ್ರಮುಖವಾಗಿರುತ್ತದೆ. ಒಂದು ವೇಳೆ ತಿಳಿದುಕೊಳ್ಳಲು ಸಾಧ್ಯವಿಲ್ಲ ಅಂತಾದರೆ ಅಂತಹ ಅಭ್ಯರ್ಥಿಗಳನ್ನು ಪುನರಾವರ್ತನೆಯ ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಿಯೇ ಎಂದು ಗುರುತಿಸಕೊಳ್ಳಬಹುದು. ಸಂಸ್ಥೆಯು ಸೂಕ್ತವಾದ ಅಭ್ಯರ್ಥಿಗಾಗಿ ಸೂಕ್ತವಾದ ಸಮಯವನ್ನು ಕೊಟ್ಟು ಸಂಸ್ಥೆಗೆ ಬರಮಾಡಿಕೊಳ್ಳುವುದು ಕೂಡ ಉತ್ತಮವಾಗಿರುತ್ತದೆ. ಸಂಸ್ಥೆಗೆ ತುರ್ಥಾಗಿ ಅಭ್ಯರ್ಥಿಬೇಕೆಂದು ಸೂಕ್ತವಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವುದು ತಪ್ಪಾಗುತ್ತದೆ.

7. ಮೇಲೆ ಕಂಡ ಎಲ್ಲಾ ರೀತಿಯ ಸಂದರ್ಶನ ಮಾಡಿ ಅಭ್ಯರ್ಥಿಯು ಕೆಲಸಕ್ಕೆ ಬಂದ ನಂತರವೂ, ಅಭ್ಯರ್ಥಿಗೆ ವಹಿಸಿಕೊಟ್ಟ ಕೆಲಸವನ್ನು ಮಾಡಲಾಗುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತವೆ. ಅಂತಹ ಅಭ್ಯರ್ಥಿಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಅಭ್ಯರ್ಥಿಗಳಿಗೆ ತಿಳುವಳಿಕೆ ಹೇಳಿ, ಸರಿಯಾದ ಪ್ರೋತ್ಸಾಹವನ್ನು ಕೊಟ್ಟು ಅಭ್ಯರ್ಥಿಯ ಮನೋಬಲವನ್ನು ವೃದ್ಧಿಸುವಂಥಹ ಕೆಲಸವನ್ನು ಸಂಸ್ಥೆಯ ಮೇಲ್ವಿಚಾರಕರು ಮಾಡಬೇಕಾಗುತ್ತದೆ. ಅಭ್ಯರ್ಥಿಯ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮಹತ್ವದ್ದಾಗಿರುತ್ತದೆ. ಹಾಗೆಯೆ ಸಂಸ್ಥೆಯು ಸಾಧ್ಯವಾದಷ್ಟು ಬೇಗ ಬೇರೆ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಬೇಕಾಗುತ್ತದೆ.

ಸಂದರ್ಶನಕ್ಕೆ ಅನುಸರಿಸಬೇಕಾದ ಕೆಲವು ನಿಯಮಗಳು
  • Sushanth says:

    ಕೆಲವು ಸಂದರ್ಭಗಳಲ್ಲಿ ಅಭ್ಯರ್ಥಿಗೆ ಕೆಲಸದ ಅನಿವಾರ್ಯ ಹೆಚ್ಚಿದ್ದು ಆತನಿಗೆ ಯಾವುದೇ ಅನುಭವವಿಲ್ಲದ ಸಮಯದಲ್ಲಿ ಮಾರ್ಗದರ್ಶನ ನೀಡುವುದು ಅಷ್ಟೇ ಉಪಕಾರಿಯಾಗಿದೆ.

Your email address will not be published. Required fields are marked *